ಬೆಂಗಳೂರ:ಮುದ್ದೇಬಿಹಾಳ ಮತಕ್ಷೇತ್ರದ ಶಾಸಕರು ಸಿ.ಎಸ್.ನಾಡಗೌಡ ರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮುದ್ದೇಬಿಹಾಳ ಮತಕ್ಷೇತ್ರದ ಕಾಂಗ್ರೆಸ ಪಕ್ಷದ ಕಾರ್ಯಕರ್ತರು ಕಾಂಗ್ರೆಸ ಪಕ್ಷದ ವರಿಷ್ಠರನ್ನು ಒತ್ತಾಯಿಸಿದ್ದಾರೆ.
ಮುದ್ದೇಬಿಹಾಳದ ಶಾಸಕರ ಮನೆ ಮುಂದೆ ತಾಲೂಕಿನ ಮುಖಂಡರುಗಳು ಪತ್ರಿಕಾಗೋಷ್ಠಿ ನಡೆಸಿ ಸಿ.ಎಸ್.ನಾಡಗೌಡರು ಸರಳ ಸಜ್ಜನಿಕೆಯ ರಾಜಕಾರಣಿಗಳು ಜಾತ್ಯಾತೀತ ನಾಯಕರು ಅಭಿವೃದ್ದಿಯಪರ ಚಿಂತಕರು ರಾಜ್ಯದ ಹಿರಿಯ ರಾಜಕಾರಣಿಗಳಲ್ಲಿ ಇವರು ಒಬ್ಬರಾಗಿದ್ದು ಹಾಗು ಅನಭವಿ ರಾಜಕಾರಣಿಗಳು ಆಗಿರುವ ನಾಡಗೌಡರಿಗೆ ಕೂಡಲೇ ಸಚಿವ ಸ್ಥಾನ ನೀಡಬೇಕು ಎಂದು ಮುದ್ದೇಬಿಹಾಳ ಮತಕ್ಷೇತ್ರದ ಬ್ಲಾಕ್ ಕಾಂಗ್ರೆಸ ಅಧ್ಯಕ್ಷರಾದ ಗುರು ತಾರನಾಳ ಮುಖಂಡರಾದ
ಶಂಕರಗೌಡ ಹಿರೇಗೌಡರ, ವಾಯ್.ಎಚ್.ವಿಜಯಕರ, ಅರವಿಂದಕೊಪ್ಪ,ಎಸ್.ಎಸ್.ಮಾಲಗತ್ತಿ,ಆರ್.ಬಿ.ಪಾಟೀಲ, ಪಿಂಟು ಸಾಲಿಮನಿ,ಅಬ್ದುಲ್ ಗಫೂರ ಮಕಾನದಾರ, ರಾಜು ರಾಯಗೊಂಡ, ವಾಯ್.ವಾಯ್. ಚಲವಾದಿ, ಸುರೇಶಗೌಡ ಪಾಟೀಲ,ರುದ್ರಗೌಡ ಆಂಗಡಗೇರಿ, ಸಂಗಮೇಶ ನಾಲತವಾಡ ,ಪುರಸಭೆ ಸದಸ್ಯರಾದ ಶಿವಾನಂದ ಶಿವಪುರ, ವೀರೇಶ ಹಡಲಗೇರಿ ,ರಿಯಾಜ ಢವಳಗಿ ಸೇರಿದಂತೆ ಸಾವಿರಾರು ಕಾರ್ಯಕರ್ತರು ಮುಖಂಡರುಗಳು ಒತ್ತಾಯಿಸಿದರು.