ಮುದ್ದೆಬಿಹಾಳ: ಬಿಜಾಪುರ ಜಿಲ್ಲೆ ಸೇರಿದಂತೆ ನಾಡಿನ ಎಲ್ಲೆಡೆ ಭಾನುವಾರ ಜ್ಞಾನಜ್ಯೋತಿ, ಭಕ್ತಿ ಭಂಡಾರಿ ಬಸವೇಶ್ವರ ಜಯಂತಿಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ.
ಈಶ್ವರ, ಬಸವ ದೇಗುಲ ಸೇರಿ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ ಕೂಡ ನೆರವೇರುತ್ತಿವೆ. ಮದುವೆ, ನಾಮಕರಣ ಗೃಹ ಪ್ರವೇಶ ಸೇರಿ ವಿವಿಧ ವಿಶೇಷ ಕಾರ್ಯಕ್ರಮಗಳು ಇಂದು ಜರುಗತ್ತಿವೆ. ಇದರ ನಡುವೆ ಜ್ಞಾನಜ್ಯೋತಿ ಬಸವಣ್ಣ ಅವರ ಸ್ಮರಿಸುವ ಕಾರ್ಯಕ್ರಮಗಳು ನಡೆಯುತ್ತಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ವಿಪಕ್ಷ ನಾಯಕ ರಾಹುಲ್, ಗಾಂಧಿ, ಸೇರಿ ಹಲವರು ನಾಡಿನ ಜನತೆಗೆ ಶುಭಕೋರಿದ್ದಾರೆ.
ಬಸವ ಜಯಂತಿ, ಪ್ರಧಾನಿ ಮೋದಿ, ಬಸವೇಶ್ವರ ಜಯಂತಿ, ರಾಹುಲ್ ಗಾಂಧಿ, ಮುದ್ದೇಬಿಹಾಳ, ಕನ್ನಡ ವಾರ್ತೆ
ನಮ್ಮ ಡಬಲ್ ಇಂಜಿನ್ ಸರ್ಕಾರದ ಸಾಧನೆಗಳ ರಿಪೋರ್ಟ್ ಕಾರ್ಡ್ ಅನ್ನು ರಾಜ್ಯದ ಮೂಲೆ ಮೂಲೆಗೂ ತಲುಪಿಸುವ ನಿಟ್ಟಿನಲ್ಲಿ ಆರಂಭಿಸಿರುವ "ಜಯವಾಹಿನಿ" ಯಾತ್ರೆಗೂ ಮುನ್ನ ಬೆಂಗಳೂರಿನ ಬಸವೇಶ್ವರ ವೃತ್ತದ, ವಿಶ್ವಗುರು ಬಸವಣ್ಣನವರ ಪುತ್ಥಳಿಗೆ ಶ್ರದ್ಧಾ ಭಕ್ತಿಯಿಂದ ನಮಿಸಿ, ವಿಶ್ವಗುರು ಬಸವಣ್ಣನವರ ಆಶೀರ್ವಾದ ಪಡೆದುಕೊಂಡೆನು.
1/2 pic.twitter.com/Mncz4WT2nk— Basavaraj S Bommai (@BSBommai) April 23, 2023
Guru Basavanna ji’s life personified brotherhood & compassion. He worked tirelessly for justice & dignity for all. His teachings lie at the foundation of our democracy.
Humble tributes to him. Honoured to be visiting Kudala Sangama on this sacred occasion of Basava Jayanti. pic.twitter.com/YJgVhbPr8v
— Rahul Gandhi (@RahulGandhi) April 23, 2023
ವರ್ಣ-ವರ್ಗ ವ್ಯವಸ್ಥೆಯನ್ನು ಧಿಕ್ಕರಿಸಿ ಸಮಾನತೆ ಮತ್ತು ಜಾತ್ಯತೀತೆಯ ನೆಲೆಗಟ್ಟಿನ ಸಮಾಜ ನಿರ್ಮಾಣಕ್ಕೆ ಹೋರಾಡಿದ
ಈ ನೆಲದ ಮೊದಲ ಸಾಮಾಜಿಕ ನ್ಯಾಯದ ಹರಿಕಾರ, ನಮ್ಮ ಪಾಲಿನ ವಿಶ್ವಗುರು ಬಸವಣ್ಣನವರಿಗೆ ಶರಣು ಶರಣಾರ್ಥಿ.ಬಸವಣ್ಣ ಕಂಡ ಸಮಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ನಮ್ಮನ್ನು ಸಮರ್ಪಿಸಿಕೊಳ್ಳೋಣ. pic.twitter.com/SCPx3r2r11
— Siddaramaiah (@siddaramaiah) April 23, 2023