ಬೆಂಗಳೂರ:ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳು ಬೋಧನಾ ಶುಲ್ಕವನ್ನು ತಮ್ಮ ಮನ ಬಂದಂತೆ ವಸೂಲಿ ಮಾಡುತ್ತಿದ್ದು ಅಂತಹ ಶಿಕ್ಷಣ ಸಂಸ್ಥೆಗಳ ಮೇಲೆ ಕಾನೂನು ರೀತ್ಯ ಕಠಿಣ ಕ್ರಮ ಕೈಗೊಳ್ಳಬೇಕು ಮುದ್ದೇಬಿಹಾಳ ತಾಲೂಕಿನ ದಲಿತ ಸಂಘಟನೆಗಳು ಮುದ್ದೇಬಿಹಾಳದ ಕ್ಷೇತ್ರ ಶಿಕ್ಷಣ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಮಂಗಳವಾರದಂದು ಮನವಿ ಸಲ್ಲಿಸಿದ ಅವರು ಖಾಸಗಿ ಅನುದಾನಿತ ಹಾಗೂ ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಮಕ್ಕಳ ಪಾಲಕರಿಂದ ಸರಕಾದ ನಿಯಮ ಉಲ್ಲಂಘಿಸಿದ ರಾಜಾರೋಷದಿಂದ ಬೇಕಾ ಬಿಟ್ಟಿಯಾಗಿ ಹಣದ ದಂಧೆಗೆ ಇಳಿದಿದ್ದು ಸರಕಾರ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಸರಕಾರದ ಬೇಜವಾಬ್ದಾರಿಯ ವಿರುದ್ಧ ಸತ್ಯಾಗ್ರಹ ಮಾಡುವದಾಗಿ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.